Thursday 19 January 2012

ನಮ್ಮ ದರ್ಗಾದ ಇತಿಹಾಸ

                             ಅನ್ನದಾನಂ ಪರಂ ದಾನಂ
                              ವಿದ್ಯಾದಾನಂ ಅತಃ ಪರ
                             ಅನ್ನೇನ ಕ್ಷಣಿಕ ತೃಪ್ತಃ (ವಿದ್ಯಾ ಯಾ ಜೀವಂಚನ)
                              ಯಾವತ್ ಜೀವಂತ ವಿದ್ಯಾಃ

        ಅನ್ನದಾನವು ಶ್ರೇಷ್ಠವಾದ ದಾನ. ವಿದ್ಯಾದನವು ಅದಕ್ಕಿಂತಲೂ ಶ್ರೇಷ್ಠವಾದದ್ದು. ಅನ್ನವು ಕ್ಷಣಿಕ ತೃಪ್ತಿ ನೀಡಿದರೆ ವಿದ್ಯೆಯು ಜೀವನ ಪರ್ಯಂತ ನಮ್ಮೊಂದಿಗಿರುತ್ತದೆ ಎಂಬ ಸುಭಾಷಿತದಂತೆ ಶತಮಾನ ಪರ್ಯಂತ ವಿದ್ಯಾದಾನ ನೀಡುತ್ತಿರುವ ಶತಮಾನೋತ್ಸವ ಸಂಭ್ರಮ ಕಂಡ ನಮ್ಮ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯು ವಿಜಾಪೂರ ನಗರದಿಂದ ೫ ಕಿ.ಮೀ.ಅಂತರದಲ್ಲಿರುವ ಖ್ವಾಜಾ ಅಮೀನ್ ದರ್ಗಾ ಪ್ರದೇಶದಲ್ಲಿ ತಲೆ ಎತ್ತಿ ನಿಂತಿದೆ.

          ವಿಜಾಪುರ ನಗರದ ಒಂದು ಬಡಾವಣೆ ಎಂದು ಗುರುತಿಸಿಕೊಳ್ಳುವ ಈ ದರ್ಗಾ ಪ್ರದೇಶವು ಮೊದಲು ಕೆರೆ, ಬನಗಳ ನಡುವೆ ಇದ್ದ ಒಂದು ಪುಟ್ಟ ಗ್ರಾಮವಾಗಿತ್ತು. ಮೊದಲು `ದುರ್ಗಾಪುರ'ವೆಂದು ಕರೆಸಿಕೊಳ್ಳುತ್ತಿದ್ದ ಈ ಊರು ಸೈಯ್ಯದಶಾ ಬುರಾನುದ್ದಿನ್ ಜಾನಬ್ ಮತ್ತುಇವರ ಮಗ ಖ್ವಾಜಾಮೀನುದ್ದಿನ ಅಲಿ ಅಲ ಎಂಬ ಸೂಫಿ ಸಂತರ ನೆಲೆಸುವಿಕೆಯಿಂದಾಗಿ ಇದನ್ನು ದರ್ಗಾ ಎಂದು ಕರೆಯಲಾರಂಭಿಸಿದರು.
                                           
                                            ಖ್ವಾಜಾಮೀನ ದರ್ಗಾ (Khwaja ameen Darga)


           ಈ ಸೂಫಿ ಸಂತರ ಪೂರ್ವಿಕರು ವಿಶ್ವದಲ್ಲಿ ಇಸ್ಲಾಂ ಧರ್ಮದ ಪ್ರಚಾರಕ್ಕಾಗಿ ಮದೀನಾದಿಂದ ಭಾರತಕ್ಕೆ ಬಂದರು. ಔರಂಗಜೇಬನ ಆಡಳಿತ ಕಾಲದಲ್ಲಿ ಮುಂಬೈ ಕರ್ನಾಟಕ ಪ್ರದೇಶವಾದ ಈ ಪ್ರದೇಶಕ್ಕೆ ತಂದೆ - ಮಗ ಇಬ್ಬರೂ ಆಗಮಿಸಿ ನೆಲೆ ನಿಂತರು. ಕುರಿಗಾಹಿಗಳ ನೆಲೆಯಾದ ಇಲ್ಲಿ ಈ ಸೂಫಿ ಸಂತರು ನೆಲೆ ನಿಂತು ಅನೇಕ ಪ್ರವಾಡಗಳನ್ನು ಮೆರೆದು ಸರ್ವ ಧರ್ಮ ಸಮನ್ವಯ ಸಾರಿದರು. ಸುತ್ತಮುತ್ತಲಿನ ಗ್ರಾಮಸ್ಥರನ್ನು ಭಕ್ತರನ್ನಾಗಿ ಪಡೆದರು. ಈ ಪ್ರದೇಶಕ್ಕೆ ಖ್ವಾಜಾಮೀನ್ ದರ್ಗಾ ಎಂಬ ಹೆಸರನ್ನು ತಂದು ಕೊಟ್ಟರು. ಇವರೀರ್ವರ ಸಮಾಧಿಗಳು ದರ್ಗಾದಲ್ಲಿದ್ದು ಅವರ ೧೬ನೇ ತಲೆಮಾರಿನ ವಂಶಸ್ಥರು ಪೂಜೆ ಪುನಸ್ಕಾರ ಸಲ್ಲಿಸುತ್ತ ಇಲ್ಲಿಯೇ ನೆಲೆ ನಿಂತಿದ್ದಾರೆ.

           ಹದಿನಾರನೇ ಪೀಠಾಧಿಕಾರಿಗಳಾದ ಅಲಿ ಸಯ್ಯದ್‍ಶಾ ಅಶದುಲ್ಲಾ ಹುಸೇನಿ ಸಜ್ಜಾದೆ ನಸೀನ ಖಾಜಾ ಅಮೀನುದೀನ ಅಲಿ ಅಲಾ ಅವರ ಪ್ರಕಾರ ೫೦೦ ವರ್ಷಗಳ ಹಿಂದೆಯೇ ನೆಲೆ ನಿಂತ ಸೂಫಿಸಂತರ ಕುರಿತು ಫಾರ್ಸಿ, ಅರೇಬಿಕ್, ದಖನಿ ಉರ್ದು ಭಾಷೆಗಳಲ್ಲಿ ಬರೆದ ಗ್ರಂಥಗಳು ಇಲ್ಲಿಯ ಲೈಬ್ರರಿಗಳಲ್ಲಿವೆ. ೧೬ನೇ ಶತಮಾನದಲ್ಲಿಯೇ ಜನರ ಆಡು ಭಾಷೆಯಾದ ದಖನಿ ಉರ್ದುವನ್ನು ಉನ್ನತಿಗೇರಿಸಿದವರು ಶ್ರೀ ಖ್ವಾಜಾಮೀನರು. ಶರಹಬ್ಬಿಯ ಶ್ರೀ ಫಕೀರ್ ಸಾಹೇಬರು, ತಿಂಥಣಿಯ ಮೌನೇಶ್ವರರು ಇವರ ಶಿಷ್ಯರಾಗಿದ್ದರು. ಇದೊಂದು ಸಾಂಸಾರಿಕ ಮಠವಾಗಿದ್ದು ಇಲ್ಲಿಯವರು ಖಾವಿಧಾರಿಗಳಾಗಿದ್ದಾರೆ.

       ಗುರು ಗೋವಿಂದ್ ದೋವು ಖಡೆ
       ಕಿಸಕೋ ಲಾಗೂ ಪಾಯ್?
       ಬಲಿಹಾರಿ ಗುರುದೇವ್ ಕೀ
       ಜಿನ್ಹೇ ಗೋವಿಂದ್ ದಿಯೋ ಬತಾಯ್||

ಎಂಬ ಸಂತ ಕಬೀರರ ದೋಹೆಯಂತೆ ಗೋವಿಂದನನ್ನು ತೋರಿಸುವ ಗುರುವಾಗಿ ಈ ಸೂಫಿ ಸಂತರು ಲಕ್ಷಾಂತರ ಬ್ರಾಹ್ಮಣ ಲಿಂಗಾಯತ ಶಿಷ್ಯರನ್ನು ಹೊಂದಿದ್ದರು.

               ದರ್ಗಾದ ಸೂಫಿ ಸಂತರನ್ನು ಕುರಿತು ಅಮೆರಿಕದ ಶ್ರೇಷ್ಠ ಇತಿಹಾಸಕಾರರಾದ ಶ್ರೀ ಮ್ಯಾಕೈಲ್‍ರವರು ಗ್ರಂಥ ರಚನೆ ಮಾಡಿದ್ದಾರೆ. ಖ್ಯಾತ ಉಪನ್ಯಾಸಕಾರರಾದ ಶ್ರೀ ರಹಮತ್ ತರೀಕೆರೆಯವರು ಕೂಡ ಇಲ್ಲಿಯ ಸೂಫಿ ಸಂತರ ಬಗ್ಗೆ ಗ್ರಂಥ ರಚಿಸಿದ್ದಾರೆ. ಹೈದರಾಬಾದಿನ ವಿಶ್ವವಿದ್ಯಾಲಯದಲ್ಲಿ ಇವರ ಕುರಿತು ಗ್ರಂಥಗಳು ಲಭ್ಯವಿದ್ದು ಪಿ.ಎಚ್.ಡಿ. ಪದವಿಯನ್ನು ಶ್ರೀ ಹುಸೇನಿ ಶಾಯಾದರವರು ಮಾಡಿದ್ದಾರೆ. ಡಾ|| ಕೃಷ್ಣ ಕೋಲಾರ ಕುಲಕರ್ಣಿಯವರ ವಿಜಾಪುರ ಇತಿಹಾಸ ಕುರಿತು ಇರುವ ಗ್ರಂಥದಲ್ಲಿಯೂ ಕೂಡ ದರ್ಗಾದ ಬಗ್ಗೆ ಉಲ್ಲೇಖಗಳಿವೆ.

        ಸವಧರ್ಮ ಸಮನ್ವಯ ಹಾಗೂ ತ್ರಿಧರ್ಮ ಸಂಗಮವಾದ ಈ ಪ್ರದೇಶವು ೧೯೯೫ರಲ್ಲಿ ಗ್ರಾಮವೆಂಬ ಹಣೆಪಟ್ಟಿ ಕಳಚಿ ವಿಜಾಪುರ ನಗರದ ಒಂದು ಭಾಗವಾಯಿತು. ಜೈನ, ಮುಸ್ಲಿಂ, ಹಿಂದು ಧರ್ಮಗಳ ಜನರಿಗೆ ಪುಣ್ಯಕ್ಷೇತ್ರವಾದ ಇಲ್ಲಿ ಶ್ರೀ ಪಾರ್ಶ್ವನಾಥ ಬಸದಿ, ಖ್ವಾಜಾಮೀನ ದರ್ಗಾದ ಶ್ರೀ ಅಡವಿ ಶಂಕರಲಿಂದ ದೇವಸ್ಥಾನಗಳು ಇವೆ.

         ಜೈನರ ಪವಿತ್ರ ಕ್ಷೇತ್ರವಾದ ಮಹೇಂದ್ರಗಿರಿಯಲ್ಲಿ ಸ್ಥಾಪಿತ ಶ್ರೀ ೧೦೦೮ ಸಹಸ್ರಫಣಿ ಪಾರ್ಶ್ವನಾಥರ ಮಂದಿರ ಕುರಿತು ಇತಿಹಾಸ ಹೀಗಿದೆ:
   ಪ್ಲೇಗ್ ಮಂದಿರದಿಂದ ತತ್ತರಿಸುತ್ತಿದ್ದ ಕಾಲದಲ್ಲಿ ಬೇರೊಂದು ಊರಿಂದ ಇಲ್ಲಿಗೆ ಬಂದು ನೆಲೆನಿಂತ ವ್ಯಕ್ತಿಯೊಬ್ಬರಿಗೆ ಮಧ್ಯಾಹ್ನದ ಮಂಪರು ನಿದ್ದೆಯ ಕನಸಿನಲ್ಲಿ `ನಾನಿಲ್ಲಿದ್ದೇನೆ' ಎಂಬ ಅಶೀರರವಾಣಿ ಕೇಳಿದಂತಾಯಿತಂತೆ. ಎದ್ದ ಆ ವ್ಯಕ್ತಿ ಗಾಬರಿಯಿಂದ ಅತ್ತಿತ್ತ ನೋಡುತ್ತಿರುವಾಗ ಸರ್ಪವೊಂದು ತನ್ನ ಹೆಡೆ ಎತ್ತಿ ಮೂರು ಸಲ ನೆಲ ಕುಟ್ಟಿತಂತೆ. ಆ ಸ್ಥಳವನ್ನು ಅಗೆದು ನೋಡಿದಾಗ ತಲೆಕೆಳಗಾಗಿ ಇಟ್ಟಂತಹ ಈ ಪಾರ್ಶ್ವನಾಥ ವಿಗ್ರಹ ಬೂದಿಯಲ್ಲಿ ದೊರೆಯಿತಂತೆ. ಪಕ್ಕದಲ್ಲೇ ಮಣ್ಣಿನ ದಿಬ್ಬೆಯಿಂದ ಆವೃತವಾದ ಸ್ಥಳವನ್ನು ಸಮಗೊಳಿಸಿದಾಗ ಈ ಮೊದಲಿದ್ದ ಮಂದಿರ ಇತ್ತಂತೆ. ಆ ಮಂದಿರದಲ್ಲಿಯೇ ವಿಗ್ರಹವನ್ನು ೧೯೦೩ರಲ್ಲಿ ಶ್ರೀ ಸುಖಾರಾಮ ಕಸ್ತೂರಿ ಚಾಂದಶಾರವರು ಸ್ಥಾಪಿಸಿದರು. ನಂತರದ ದಿನಗಳಲ್ಲಿ ಜೈನ ಸಂದರ್ಶಕರ ಸಂಖ್ಯೆ ಹೆಚ್ಚಿದಂತೆಲ್ಲಾ ಮಂದಿರ ನವೀಕರಣಗೊಳ್ಳುತ್ತಾ ಸಾಗಿತು. ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸಹಸ್ರಫಣಿ ಪಾರ್ಶ್ವನಾಥ ಸ್ವಾಮಿಯು ೧೦೦೮ ಹೆಡೆಗಳುಳ್ಳ ಆಧಾರ ಹೊಂದಿದ್ದು ಪ್ರತಿ ಹುಣ್ಣಿಮೆಗೊಮ್ಮೆ ಕ್ಷೀರಾಭಿಷೇಕ ಮಾಡಿಸಿಕೊಳ್ಳುತ್ತಿದ್ದಾನೆ. ಒಂದು ಹೆಡೆಯಲ್ಲಿ ಎರೆದ ಕ್ಷೀರ ಎಲ್ಲ ಹೆಡೆಗಳ ಮುಖೇನ ಹಾಯ್ದು ಸ್ವಾಮಿಯ ಬಲಭುಜದಿಂದ ಕೆಳಗೆ ಇಳಿಯುತ್ತದೆ. ಶ್ವೇತಾಂಬರ-ದಿಗಂಬರರಿಬ್ಬರಿಂದಲೂ ಪೂಜೆಗೊಳ್ಳುತ್ತಿರುವ ಈ ಸ್ವಾಮಿಯ ವಿಗ್ರಹ ಮತ್ತೆಲ್ಲಿಯೂ ಕಾಣ ಸಿಗದು.
                                                   
                                                              ಸಹಸ್ರಫಣಿ ಪಾರ್ಶ್ವನಾಥ

          ಪುರಾತನ ಇತಿಹಾಸ ಹೊಂದಿದ ಶ್ರೀ ಖ್ವಾಜಾಮೀನ ಮನರೆಯ ಜಾತ್ರೆಯು ರಮಜಾನ ತಿಂಗಳ ೨೩ನೇ ದಿನದಿಂದ ೩ದಿನಗಳ ಕಾಲ ನಡೆಯುತ್ತದೆ. ೧೮ ಮಣ ಬಂಗಾರದ ಕಳಶ ಹೊಂದಿದೆ. ಈ ಮಸೀದೆಯಲ್ಲಿ ಮೊದಲ ದಿನ ಲಿಂಬೆ ಹಣ್ಣು ಉಜ್ಜುವರು. ಗಂಧ, ಉರುಸು ಎಂದು ೩ ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಎಲ್ಲ ಧರ್ಮದ ಜನರೂ ಶ್ರದ್ಧಾ ಭಕ್ತಿಗಳಿಂದ ಭಾಗವಹಿಸುವರು.

        ಲೇಖಕಿಯರು : ಶ್ರೀಮತಿ ಜಿ.ಎಸ್.ಯರನಾಳ
                                      ಸ.ಶಿ.
ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.೪೮
ಖ್ವಾಜಾಮೀನ ದರ್ಗಾ ಬಿಜಾಪುರ

Thursday 5 January 2012

ನಮ್ಮ ಬೋಧನೆ ಹೀಗಿದೆ

                      ಬೋಧನೆಯಲ್ಲಿ ತೊಡಗಿರುವ ಶಿಕ್ಷಕ ವೃಂದದವರ ಚಿತ್ರಗಳು


                                                                          ನಲಿ-ಕಲಿ



                                                                         ನಲಿ-ಕಲಿ


                                                                ನಾಲ್ಕನೆಯ ತರಗತಿ


                                                    ಕಂಪ್ಯೂಟರ ಶಿಕ್ಷಣ ನೀಡುತ್ತಿರುವುದು


                                                                 ಆರನೆಯ ತರಗತಿ

                                                              ಏಳನೆಯ ತರಗತಿ

                                  


                                       ಮಕ್ಕಳು ಸರ್ವಾಂಗ ಸುಂದರ ವ್ಯಾಯಾಮ ಮಾಡುತ್ತಿರುವುದು




Add caption






our school photo

                                                ನಮ್ಮ ಸರಕಾರಿ ಶಾಲೆ ನಂ ೪೮ ದರ್ಗಾ ಬಿಜಾಪೂರ