Tuesday 24 July 2012

ವರಾಹ ಮಿಹಿರ (ಕ್ರಿ.ಶ.೪೮೮-೫೮೭)
ಗುಪ್ತ ಕಾಲದ ಸುಪ್ರಸಿದ್ದ ಜ್ಯೋತಿಷ್ಯ ವಿದ್ವಾನ್ ವರಾಹಮಿಹಿರನ ಜನನ ಕಪಿತ್ತಕ್ / ಸಂಕಾಶ್ಯ ಗ್ರಾಮದಲ್ಲಿ ೪೯೯ ರಲ್ಲಿ ಬ್ರಾಹ್ಮಣ ಪರಿವಾರದಲ್ಲಾಯಿತು. ಅವರ ತಂದೆ ಆದಿತ್ಯದಾಸನಿಂದಲೇ ಜ್ಯೋತಿಷ್ಯ ವಿದ್ಯೆಯನ್ನು ಕಲ್ಪಿಸಿಕೊಂವರು.
ಅವ್ರ್ ಪ್ರಾರಂಭದ್ ಹೆಸರು ಮಿಹಿರವೆಂದಿತ್ತು. ಮಿಹಿರವೆಂದರೆ ಸೂರ್ಯ. ಅವರು ಮಿಹಿರನಿಂದ ವರಾಹಮಿಹಿರವಾದದ್ದು ಒಂದು ರೋಚಕ ಕಥೆ ಇದೆ. ಮಿಹಿರನ ವಿದ್ವತ್ತಿಗೆ ಪ್ರಭಾವಿತನಾದ ರಾಜಾ ವಿಕ್ರಮಾದಿತ್ಯನು ತನ್ನ ದರ್ಬಾರದ್ ಒಂದು ರತ್ನವೆಂದು ಉಳಿಸಿಕೊಂಡು. ರಾಜರಿಗೆ ಒಂದು ಗಂಡು ಮಗುವಾದಾಗ ಮಿಹಿರನು ಈ ಮಗುವಿನ್ ಭವಿಷ್ಯ ಹೇಳಿದ - ಈ ಮಗು ೧೮ ವರ್ಷವನಾದಾಗ ಇಂತಹ ದಿನವೇ ಅವನ ಮೄತ್ಯುವಾಗುವುದು ಎಂದು.
    ರಾಜನಿಗೆ ಮಿಹಿರನ ಮೇಲೆ ಪೂರ್ಣ ವಿಶ್ವಾಸವಿದ್ದಿತು. ಆದರೂ ರಾಜನು ಮಗನನ್ನು ಒಳ್ಳೆ ಸಂರಕ್ಷಣೆಯಲ್ಲಿಟ್ಟು ನೋಡಿಕೊಳ್ಳತೊವಗಿದನು. ಅವನನ್ನು ಬದುಕಿಸಲು ಶಕ್ತಿಮೀರಿ ಪ್ರಯತ್ನಿಸಿದನು. ಆದರೇನು ೧೮ನೇ ವರ್ಷದಲ್ಲಿ ಮಿಹಿರ ಹೇಳಿದ ದಿನ್ವೇ ಒಂದು ಕಾಡುಹಂದಿಯು ರಾಜಪುತ್ರನನ್ನು ಕೊಂದು ಹಾಕಿತು. ಇದರಿಂದ ಮಿಹಿರನಿಗೂ ಅತ್ಯಂತ ದುಃಖವಾಯಿತು. ಆದರೂ ಅವನಿಗೆ ಇದೊಂದು ಖಗೋಲದ ಗೆಲುವೆಂದು ತಿಳಿದನು. ರಾಜಾ ವಿಕ್ರಮಾದಿತ್ಯನು ಮಗನ ಸಾವಿನ ನೋವಿನಲ್ಲೂ ಮಿಹಿರನ್ ಭವಿಷ್ಯವಾಣಿಗೆ ಮಾರುಹೋಗಿ ಅಚ್ಚರಿಪಟ್ಟ. ಮಘದ ರಾಜ್ಯದ ಎಲ್ಲಕ್ಕೂ ಶ್ರೇಷ್ಟ ಪುರಸ್ಕಾರವಾದ ವರಾಹದ್ ಚಿನ್ಹವನ್ನು ಅರ್ಪಿಸಿದನು. ಅದರಿಂದಾಗಿಯೇ ಅವನು ವರಾಹಮಿಹಿರನೆಂದು ಹೆಸರಿನಿಂದ್ ಪ್ರಸಿದ್ದನಾದನು.
    ವರಾಹಮಿಹಿರನು ಆರ್ಯಭಟ್ಟನಂತೆ ಪೄಥ್ವಿ ದುಂಡಗಿದೆಯೆಂದೇ ಹೇಳಿದ . ಯಾವುದೇ ಒಂದು ಶಕ್ತಿಯು ಭೂಮಿಯಲ್ಲಿ ಅಡಗಿದೆ ಎಂದು ಹೇಳುತ್ತಿದ್ದನು. ನಂತರ ಮುಂದೆ ಇದೇ ಶಕ್ತಿಗೆ ಗುರುತ್ವಾಕರ್ಷಣವೆಂದು ಕರೆಯಲಾಯಿತು.
                 ಲೇಖಕರು : ರವಿ ನರಗುಂದ ಶಿಕ್ಷಕರು

No comments:

Post a Comment